ಬೆಂಗಳೂರು, ಆ.17: ಕೋವಿಡ್, ಆರ್ಥಿಕ ಸಂಕಷ್ಟದಂತಹ ಸಮಸ್ಯೆಗಳನ್ನು ಮರೆಮಾಚುವ ಸಲುವಾಗಿ ಬಿಜೆಪಿ ನಾಯಕರು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಚರ್ಚೆ ಎಳೆತಂದಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಟೀಕಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಮಾರ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ,ಕಳೆದ ಎರಡು
ವರ್ಷಗಳಿಂದ ಯಾವುದೇ ಅಭಿವೃದ್ಧಿ ಯೋಜನೆ ರೂಪಿಸಿಲ್ಲ. ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟಲು
ಆಗಿಲ್ಲ. ಅಲ್ಲದೆ,ಆಕ್ಸಿಜನ್, ಬೆಡ್ ಸಿಗದೇ ಸಾವಿರಾರು ಸೋಂಕಿತರು ಸಾವನ್ನಪ್ಪಿದರು.ಇವರ ಆಡಳಿತ ಬಗ್ಗೆ ಜನರು ರೋಸಿಹೋಗಿದ್ದಾರೆ. ಇದನ್ನು ಜನರಿಂದ ದೂರಗೊಳಿಸಲು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮಾಜಿ ಪ್ರಧಾನಿ, ಈ ದೇಶದ ಉಕ್ಕಿನ ಮಹಿಳೆ ಪ್ರಧಾನಿ ಇಂದಿರಾ ಗಾಂಧಿರವರು 16 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನೀಡಿ ಭಾರತ ದೇಶ ಅಭಿವೃದ್ಧಿಯಾಗಲು ಸಾಕಷ್ಟು ಕೊಡುಗೆ ನೀಡಿದ್ದಾರೆ.ಜತೆಗೆ
ಭಯೋತ್ಪಾದಕರ ಗುಂಡಿಗೆ ಬಲಿಯಾದರು.
ಇಂದಿರಾ ಗಾಂಧಿ ಸ್ಮರಣಿಯಲ್ಲಿ
ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಬಡವರು, ಕೂಲಿ ಕಾರ್ಮಿಕರು 5 ರೂಪಾಯಿ ಉಪಹಾರ 10 ಊಟಕ್ಕೆ ವ್ಯವಸ್ಥೆಯನ್ನು 198 ವಾರ್ಡ್‌ಗಳಲ್ಲಿ ಹಿಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟಿನ್ ಸ್ಥಾಪಿಸಲಾಯಿತು.
ಪ್ರತಿ ದಿನ ಕಡಿಮೆ ಖರ್ಚಿನಲ್ಲಿ
ಬಡವರು ಊಟ ಮಾಡುತ್ತಿದ್ದರು.ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಲಕ್ಷಾಂತರ ಜನ ಇಂದಿರಾ ಕ್ಯಾಂಟಿನ್ ಉಚಿತ ಊಟ ವಿತರಣೆಯಿಂದ ಜೀವನ ಸಾಗಿಸಿದರು.
ಈ ರೀತಿಯ ಜನಪ್ರಿಯ ಯೋಜನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತಿದೆ ಎಂದು ಬಿಜೆಪಿ ಕೆಲವು ನಾಯಕರುಗಳು ವ್ಯವಸ್ಥಿತವಾಗಿ ಪಿತೂರಿ ಮಾಡುತ್ತಾ ಬರುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಅನುದಾನ ನೀಡಿಲ್ಲ. ಇನ್ನೂ, ಅಬಕಾರಿ ಸಚಿವ ಗೋಪಾಲಯ್ಯ, ಬಿಜೆಪಿ ನಾಯಕ ಸಿ.ಟಿ.ರವಿರವರು ಇಂದಿರಾ ಕ್ಯಾಂಟೀನ್
ಹೆಸರಿನ ಬದಲು ಅನ್ನಪೂರ್ಣೇಶ್ವರಿ ಕ್ಯಾಂಟಿನ್ ಎಂದು ಹೆಸರು ಇಡಬೇಕೆಂದು ಹೇಳಿದ್ದಾರೆ. ಆದರೆ, ದೇವರ ಹೆಸರಿನಲ್ಲಿ ರಾಜಕೀಯ ಮಾಡಿದರೆ ಸರಿಯಲ್ಲ ಎಂದು ಶಿವರಾಜು ವಾಗ್ದಾಳಿ ನಡೆಸಿದರು.
ಅಲ್ಲದೆ, ಯಾರೇ ಆಗಲಿ ಇತಿಹಾಸ ಓದಬೇಕು, ಅಂದು ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಿದ ಸಚಿವರು, ಪಕ್ಷ ಬದಲಾದಂತೆ ಸಿದ್ಧಾಂತ ಬದಲಾವಣೆ ಮಾಡಿಕೊಂಡಿರುವುದು ಎಷ್ಟು ಸಮಂಜಸ. ವಿವಾದ ಸೃಷ್ಟಿ ಮಾಡುವುದು ಬೇಡ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಹಾಲಕ್ಷ್ಮಿ ಪುರ ವಾರ್ಡಿನ ಮಾಜಿ ಸದಸ್ಯ ಎಸ್.ಕೇಶವ್ ಮೂರ್ತಿ ಸೇರಿದಂತೆ ಪ್ರಮುಖರಿದ್ದರು.